Friday, November 26, 2010

ವಸಂತ!!

ಕಾಲದ ಕಣ್ಣಿನಲ್ಲಿ ಹಸಿರುನಿಸುವ ಹೆಸರು ನಿನ್ನದು

ಪ್ರತಿ ಉಸಿರಿನಲ್ಲೂ ಪಸರಿಸುವ ನಗೆಯು ನಿನ್ನದು

ಈ ಹಸಿರು ಹೆಸರಿನ ಉಸಿರಿನಲ್ಲಿ .. ಪಸರಿಸುವ ನಗೆಯು

ಸದಾ ಶಾಶ್ವಥವಿರಲಿ ಎಂಬ ಹಾರೈಕೆ ನನ್ನದು||


ಕಂಚು ಕೂಡ ನಾಚುವಂಥ ಮಿಂಚು ನೋಟ ನಿನ್ನದು

ಒಂದಿಂಚು ಸಂಚಿಲ್ಲದ ಮಗುವಿನntha ಮಾತು ನಿನ್ನದು

ಈ ಮಿಂಚಿನಂಥ ನೋಟದಲ್ಲಿ, ಸಂಚಿಲ್ಲದ ಮಾತು...

ಸದಾ ಶಾಶ್ವಥವಿರಲಿ ಎಂಬ ಹಾರೈಕೆ ನನ್ನದು||


ಪುಟ್ಟ ಪುಟ್ಟ ಹೆಜ್ಜೆ ಇದುತ , ಪುತಿದಡುವ ಮನಸು ನಿನ್ನದು

ಕಟ್ಟಾಕಡೆಯ ಕಾರ್ಯವದರು , ಪೂರೈಸುವ ಹುಮ್ಮಸ್ಸು ನಿನ್ನದು

ಈ ಪುತಿದಾಡುವ ಮನಸೊಳಗೆ, ಮಿಡಿಯುತಿರುವ ಹುಮ್ಮಸ್ಸು

ಸದಾ ಶಾಶ್ವಥವಿರಲಿ ಎಂಬ ಹಾರೈಕೆ ನನ್ನದು||


ನಾ ಹಾರೈಸುವ ಈ ಎರಡು..

ನೀ ಕಂಡಂಥ ಕನಸುಗಳು ಚೂರಾದರು,ನೀ ಕಾಣುವ ಕನಸುಗಳು ಕೊನೆಯಾಗದಿರಲಿ
ವಸಂತ ಕಾಲದ ಹುರುಪು ಮುಗಿದರು , ಈ ವಸಂತ ಸದಾ ಹಸಿರಾಗಿರಲಿ ಎಂದೆಂದೂ ನಗುತಿರಲಿ..

No comments:

Post a Comment