Friday, November 26, 2010

nanna preethiya...!!

ಮುದ್ದು ಮುಖದ ಪೆದ್ದು ಮನಸಿನ ಮೆಚ್ಚಿನ ಹುಡಗಿ
ನಸು ನಕ್ಕರೆ ಕಲ್ಲು ಸಕ್ಕರೆ ನನ್ನ ಚೆಂದದ ಬೆಡಗಿ
ಕೊಂಕಿಲ್ಲದ ನಿನ್ನ ಮಾತಿನಲ್ಲಿ ಮಗುವಿನಂಥ ಮುಗ್ಧತೆ
ಮಗುವೊಳಗಿನ ಮ್ರುದುಥ್ವಕೆ ನಿನಗೆ ಇಂದು ಮಾನ್ಯತೆ||


ಉಸಿರಾಡುವ ಗಾಳಿಯಲ್ಲಿ ನಿನ್ನ ಬಿಸಿ ಸ್ಪರ್ಶವೋ
ಹರಿದಾಡುವ ನೀರಿನಲ್ಲಿ ನಿನ್ನ ನೋಟದ ಹರ್ಷವೋ
ಓಡುತಿರುವ ಗಳಿಗೆಯಲ್ಲಿ ನಿನ್ನ ನೆನಪುಗಳ ಜಳಕ
ಕಣ್ಮುಚಿದರೆ ಮನಸೊಳಗೆ ನಿನ್ನದೇ ಕನಸುಗಳ ಪುಳಕ||


ನನ್ನ ಪ್ರೀತಿಯ ಪ್ರತಿ ರೀತಿಯಲ್ಲಿ ನಿನ್ನ ಪ್ರೀತಿಸುವುದೇ ಗುರಿ
ನನ್ನ ಪ್ರೀತಿಯ ನೀ ಅರಿತರೆ ; ಹು ಅಂದರೆ ..ಅಂದೇ ಏಕಾಂತ್ಹಕೆ ಗರಿ
ಅರಿವಿಲ್ಲದೆ ಹುಟ್ಟಿದ ಈ ಪ್ರೀತಿಯ ಮೆಚಿಬಿದು
ನಿನಗರಿತಿರುವ ಪ್ರಥಿಕ್ಷನಗಳ ನನ್ನೊಂದಿಗೆ ಹಂಚಿ ಬಿಡು||


ನಿನಗೆಂದು ಕಟ್ಟಿರುವೆ ನನ್ನ ಮನಸೋಳಗೊಂದು ಗುಡಿಯ
ಬಾ ಗೆಳತಿ ಅಲಂಕರಿಸು, ಈ ನನ್ನ ಹೃದಯ ಬಂಡಿಯ


ಬಡವ ನಾ,
ನೀ ಅನಿಸುವ ಶ್ರೀಮಂತಿಕೆಯಲ್ಲಿ ನಾ ಬಾಳಲಾರೆ,
ಆದರು .. ನಿನಗೆತುಕದ ಪ್ರೀತಿಯ ನ ಥಳುಪಿಸಬಲ್ಲೆ..
ನೀ ಬಯಸುವ ದುಬಾರಿ ಉಡುಗೆ ನಾ ಕೊದದಿರಬಲ್ಲೆ
ಆದರು .. ನಿನಗೊಪ್ಪುವ ನಗುವಿನಲ್ಲಿ.. NO ಅನ್ನ ಬಲ್ಲೆ ||


ನಿತ್ಯದ ಜಂಜಾಟದಲ್ಲಿ , ನಾ ನಿನ್ನ ಗದರಿಸಬಹುದು
ಮಿಥ್ಯದ ಮಾತುಗಳಿಂದ , ನ ನಿನ್ನ ವಂಚಿಸಬಹುದು
ಆದರು..
ಕೊಂಚವೂ ನಿನ್ನ ಮೇಲೆ ನನ್ನ ಪ್ರೀತಿ ಕಮ್ಮಿಯಗದು
ಕನ್ನಿರಿಗೆ ನಿನ್ನ ಬಾಳು ಗುರಿಯಗದು||


ಪ್ರೀತಿಸುವ ಪ್ರತಿ ಪ್ರೀತಿ ಇಂದ ನಿನ್ನ ಪ್ರೀತಿಸುತಿರುವೆ
ನಾ ಇಡುವ ಪ್ರತಿ ಹೆಜ್ಜೆಗೂ ನಿನ್ನ ಅರಸುತಿರುವೆ
ಎಂದೆಂದು ನಾ ನಿನ್ನ ಪ್ರೀತಿಸುತಿರುವೆ
ಎಂದೆಂದು ನಾ ನಿನ್ನ ಪ್ರೀತಿಸುತಿರುವೆ||

No comments:

Post a Comment